ಶ್ರೀ ವಿದ್ಯಾ ಚೌಡೇಶ್ವರಿ ಮಹಾಸಂಸ್ಥಾನ
Sri Vidya Chowdeshwari Mahasamsthana
ಕೆ ಜಿ ದೇವ ಪಟ್ಟಣ, ಹಂಗರಹಳ್ಳಿ, ಬೆಣಚ ಕಲ್ಲು ರಸ್ತೆ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ - 572 123
ಮಾನ್ಯರೇ,
ದಿನಾಂಕ 17-01-2022 ರ ಸೋಮವಾರ ಹುಣ್ಣಿಮೆಯಂದು "ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ವರ್ಧಂತಿ" ಪ್ರಯುಕ್ತ ಪೂಜಾ ಕೈಂಕರ್ಯಗಳನ್ನು ಏರ್ಪಡಿಸಲಾಗಿದ್ದು, ಭಕ್ತಾದಿಗಳು ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗಬೇಕೇಂದು ವಿನಂತಿಸಲಾಗಿದೆ.
ವಿಶೇಷ ಸೂಚನೆ: ಇಷ್ಟು ದಿವಸಗಳ ಕಾಲ ಅಮ್ಮನವರನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯಲಾಗುತ್ತಿದ್ದು ಇನ್ನು ಮುಂದೆ ಅಮ್ಮನವರ ದರ್ಶನ ಮಾತ್ರ ಲಭ್ಯವಿರುತ್ತದೆ. ಅಮ್ಮನವರನ್ನು ಸ್ಪರ್ಶಿಸಿ ನಮಸ್ಕರಿಸಲು ದಿನಾಂಕ 17-01-2022 ರಂದು ಕೊನೆಯ ದಿನವಾಗಿದ್ದು, ಭಕ್ತಾಧಿಗಳು ಈ ಸದಾವಕಾಶವನ್ನು ತಪ್ಪದೇ ಉಪಯೋಗಿಸಿಕೊಳ್ಳುವಂತೆ ಹಾಗೂ ಇನ್ನು ಮುಂದೆ ಅಮ್ಮನವರವನ್ನು ಸ್ಪರ್ಶಿಸದೆ ದರ್ಶನ ಪಡೆಯುವಂತೆ ವಿನಂತಿಸಿಕೊಳ್ಳಲಾಗಿದೆ ಹಾಗೂ ಸಹಕರಿಸುವಂತೆ ಕೋರಲಾಗಿದೆ.
ಶ್ರೀ ವಿದ್ಯಾ ಚೌಡೇಶ್ವರಿ ಮಹಾಸಂಸ್ಥಾನ ಮಠ - ಹಂಗರಹಳ್ಳಿ - ಕೆ.ಜಿ. ದೇವ ಪಟ್ಟಣ